Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೀತಾ ಕನ್ನಡತನ ಮತ್ತು ಪ್ರೀತಿ ಕಥನ -4/5 ****
Posted date: 28 Sat, Sep 2019 – 03:03:17 PM

ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಸಾರ್ವಭೌಮ.  ಪರಭಾಷೆಯವರಿಗೆ ಅವಕಾಶ ಮಾಡಿಕೊಟ್ಟರೆ ಮುಂದಿನ ಮೂವತ್ತು ವರ್ಷಕ್ಕೆ ಚಿತ್ರಮಂದಿರದ ಮುಂದೆ ಅವರದೇ ಕಟ್ ಔಟ್ ನಿಲ್ಲುತ್ತದೆ.  ಹೀಗೆ ಗೀತಾ ಚಿತ್ರದಲ್ಲಿ ಗಣೇಶ್ ಡೈಲಾಗ್ ಹೇಳುತ್ತಿರುವಾಗ ಚಿತ್ರಮಂದಿರದಲ್ಲಿ ಕರತಾಡನ, ಶಿಳ್ಳೆ ಶಬ್ದ ಕೇಳಿಬರುತ್ತದೆ. ಮಹಿಳಾ ಪ್ರಧಾನ ಕತೆಯಲ್ಲಿ ಗೋಕಾಕ್ ವರದಿ ಚಳುವಳಿ ಸನ್ನಿವೇಶಗಳು ಚಿತ್ರದ ಅರ್ಧ ಭಾಗ ಕಾಣಿಸಿಕೊಳ್ಳುತ್ತದೆ. ಇಂದಿನ ಯುವಜನಾಗಂಕ್ಕೆ ಇದರ ಬಗ್ಗೆ  ಮಾಹಿತಿ ಇಲ್ಲ. ವಿಷಯದ ಬಗ್ಗೆ ಆಸಕ್ತಿ ಇರುವವರು ಚಿತ್ರ ನೋಡಬಹುದು. 

ಸಿನಿಮಾದಲ್ಲಿ  ಚೌಕಟ್ಟು ಮೀರದ ಪಾತ್ರಗಳು ಇರಲಿದೆ. ನೋಡುಗನಿಗೆ ಅರ್ಥವಾಗುವಂತೆ  ಚಿತ್ರಕತೆ ಇರುವುದು  ಪ್ಲಸ್ ಪಾಯಿಂಟ್ ಆಗಿದೆ. ಕತೆಯಲ್ಲಿ ಕನ್ನಡದ ಭಾಷಾಭಿಮಾನ, ಪ್ರೀತಿ, ನೋವು-ನಲಿವು, ದುಗುಡ ಇತ್ಯಾದಿ ಅಂಶಗಳು ಚಿತ್ರದ ವೇಗವನ್ನು ಎತ್ತಿ ಹಿಡಿದಿದೆ.  ಮೊದಲರ್ಧ ಗೋಕಾಕ್ ಚಳುವಳಿ ವಾಸ್ತವದ ನೆನಪುಗಳನ್ನು ತೆರೆದಿಟ್ಟಿದೆ. ವಿರಾಮ ನಂತರ ಪಾರದರ್ಶಕವಾದ ಪ್ರೀತಿ ಕತೆ ಬರುವುದು ಕುತೂಹಲ  ತರಿಸುತ್ತದೆ. ಎಲ್ಲವನ್ನು ಹೊಸದೊಂದಿಗೆ ಹೇಳಿರುವ ನಿರ್ದೇಶಕ ವಿಜಯ್‌ನಾಗೇಂದ್ರ ಮೊದಲ ಪ್ರಯತ್ನದಲ್ಲೆ ತಾನೊಬ್ಬ ಒಳ್ಳೆಯ ತಂತ್ರಜ್ಘನೆಂದು ಸಾಬೀತು ಪಡಿಸುವಲ್ಲಿ ಚಿತ್ರವು ಸಾಕ್ಷಿಯಾಗುತ್ತದೆ.

ಇಲ್ಲಿಯವರೆಗೂ ಲವರ್‌ಬಾಯ್, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಗಣೇಶ್ ಪ್ರಥಮ ಬಾರಿ ಆಂಗ್ರ್ರಿ ಯಂಗ್ ಮ್ಯಾನ್ ಆಗಿ ಎಲ್ಲಾ ರೀತಿಯಲ್ಲಿ ಇಷ್ಟವಾಗುತ್ತಾರೆ. ಚಳುವಳಿ ಹೋರಾಟಗಾರ, ಪ್ರೀತಿಯಲ್ಲಿ ಬೀಳುವ ಮುಗ್ದನಾಗಿ ಎರಡು ಶೇಡ್‌ಗಳಲ್ಲಿ  ಸುಲಲಿತವಾಗಿ  ನಟನೆ ಮಾಡಿರುವುದು ಸಿನಿಮಾಕ್ಕೆ ಕಳಸವಿಟ್ಟಂತೆ ಆಗಿದೆ. ಶಾನ್ವಿಶ್ರೀವಾತ್ಸವ್ ಗತಕಾಲ, ಪ್ರಸಕ್ತಕಾಲ ಹೀಗೆ ಎರಡಲ್ಲೂ ಕಾಣಿಸಿಕೊಂಡು ಡಬ್ಬಿಂಗ್ ಮಾಡಿರುವುದು ಚೆಂದ ಅನಿಸುತ್ತದೆ.  ಪ್ರಯಾಗ್‌, ಪಾರ್ವತಿ ಅರುಣ್ ಗಿಂತ ಸುಧಾರಾಣಿ, ದೇವರಾಜ್‌ಗೆ ಹೆಚ್ಚು ಸ್ಕೋಪ್ ಸಿಕ್ಕಿದೆ.  ಅಚ್ಯುತಕುಮಾರ್, ರಂಗಾಯಣರಘು ಅವರನ್ನು  ಹೆಚ್ಚು ಬಳಸಿಕೊಳ್ಳುವ ಅವಕಾಶವಿತ್ತು. ಸಂತೋಷ್‌ ಆನಂದ್‌ರಾಮ್  ಅವರ ಕನ್ನಡ ಕನ್ನಡ ಗೀತೆಗೆ ಇಂಪಾದ ಸಂಗೀತ ಒದಗಿಸಿರುವ ಅನುಪ್‌ರುಬೆನ್ಸ್ ಕೆಲಸಕ್ಕೆ ಪೂರಕವಾಗಿ ಶ್ರೀಶಕೂದುವಳ್ಳಿ ಛಾಯಾಗ್ರಹಣ ಸಾಥ್ ನೀಡಿದೆ.  ಸೈಯದ್‌ಸಲಾಂ ಮತ್ತು ಶಿಲ್ಪಗಣೇಶ್ ನಿರ್ಮಾಣ ಮಾಡಿರುವ ಚಿತ್ರವು ಪೈಸಾ ವಸೂಲ್ ಎನ್ನಬಹುದು.
4/5 ****


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೀತಾ ಕನ್ನಡತನ ಮತ್ತು ಪ್ರೀತಿ ಕಥನ -4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.